Professional directory

ಬ್ರಾಹ್ಮಣ ಪರಂಪರೆ


ಸಹಸ್ರಾರು ವರುಷಗಳ ಇತಿಹಾಸ ಮತ್ತು ಸಾಂಸ್ಕ್ರಿತಿಕ ಪರಂಪರೆಯಿರುವ ಬ್ರಾಹ್ಮಣ ಸಮುದಾಯವು ಈವರೆಗೆ ಅನೇಕ ಏಳುಬೀಳುಗಳನ್ನು ಕಂಡಿದೆ. ಅನೇಕ ರಾಜ ಮನೆತನಗಳಿಗೆ ಮಾರ್ಗದರ್ಶಕರಾಗಿ, ಬ್ರಹ್ಮತೇಜಸ್ಸಿನ ಜತೆಗೆ ಕ್ಷಾತ್ರ ತೆಜಸನ್ನೂ ಪ್ರಕಾಶಿಸಿರುವ, ಚಾಣಕ್ಯ, ವಿದ್ಯಾರಣ್ಯ ಮುಂತಾದವರ ಧೀಶಕ್ತಿ ಮತ್ತು ನಾಯಕತ್ವ ಇಂದಿಗೂ ಚಿರಸ್ಮರಣೀಯವಾಗಿದೆ. ರಾಜ್ಯವಾಳಿದರೂ ರಾಜರಾಗದ ನಿಷ್ಕಾಮಕರ್ಮೀಗಳು ಇವರು. ಸನಾತನ ಧರ್ಮದ ಹಾಗೂ ವೇದೋಪನಿಷತ್ತುಗಳ ರಕ್ಷಣೆಯ ಮತ್ತು ಘೋಷಣೆ ಮಹತ್ಕಾರ್ಯವನ್ನು ಕೈಗೊಂಡು, "ಧರ್ಮೋ ರಕ್ಷತಿ ರಕ್ಷಿತಃ" ಎಂಬ ಯುಕ್ತಿಯಂತೆ ಇಂದಿಗೂ ಶಿಷ್ಯ ಪರಂಪರೆಯ ದೀಪದ ಸಾಲುಗಳನ್ನು ಪ್ರಜ್ವಲಿಸಿದ್ದಾರೆ.

ಇಷ್ಟೇ ಅಲ್ಲದೆ, ಲೌಕಿಕ ವಿದ್ಯೆಯ ಅಂಗಗಳಾದ ಸಂಗೀತ, ಸಾಹಿತ್ಯ, ಕಲೆ,ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲೂ ಗಣನೀಯವಾದ, ಆದರ್ಶಪ್ರಾಯವಾದ, ಶಾಶ್ವತವಾದ ಸೇವೆಯನ್ನು ಸಲ್ಲಿಸಿರುವ ಅನೇಕ ವಿಪ್ರ ಶ್ರೇಷ್ಠರನ್ನು ನಾವು ಸ್ಮರಿಸಿಕೊಳ್ಳಬಹುದು. ಸಮಸ್ತ ಹಿಂದೂ ಸಮಾಜವನ್ನು ಜಾಗೃತಿಗೊಳಿಸಿದ ಕೀರ್ತಿಯೂ ವಿಪ್ರ ಸಮಾಜಕ್ಕೆ ಸಲ್ಲುತ್ತದೆ. ಅಜ್ಞಾನದಲ್ಲಿದ್ದು, ಪರಕೀಯರ ಆಡಳಿತದಲ್ಲಿ ಅವಿದ್ಯೆ, ಬಡತನದಲ್ಲಿ ಕಮರಿ ಹೋಗಿದ್ದ ಭಾರತೀಯರನ್ನು ಹುರಿದುಂಬಿಸಿ, ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಮೊಳಗಿಸಿ, ದೇಶಭಕ್ತಿಯನ್ನು ಮೂಡಿಸಿದ ರಾಷ್ಟ್ರನಾಯಕರಲ್ಲಿ ಮೊದಲಿಗರು "ಬ್ರಾಹ್ಮಣರೇ" ಎಂಬುದು ಚಾರಿತ್ರಿಕ ಸತ್ಯ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿತು ಪಾಶ್ಚಾತ್ಯ ಸಂಸ್ಕೃತಿಯನ್ನೂ ಅಳವಡಿಸಿಕೊಂಡು, ವಿಜ್ಞಾನ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಪಡೆದು, ಉನ್ನತ ಸ್ಥಾನಗಳನ್ನು ಅಲಂಕರಿಸಿದವರೂ ಬ್ರಾಹ್ಮಣರೇ. ಇಂತಹ ಪರ್ವ ಕಾಲದಲ್ಲಿ ಕೇವಲ ವೇದಾಧ್ಯಯನ, ಯಜ್ಞ-ಯಾಗಾದಿಗಳಿಂದ ಪುರಷಾರ್ಥವನ್ನು ಪಾಲಿಸುವುದರ ಜೊತೆಗೆ ವಿಪ್ರರು ಹಲವು ರೀತಿಯ ಕಸುಬುಗಳನ್ನು ಆರಿಸಿಕೊಂಡು, ಉತ್ತಮ ಮಟ್ಟದದಲ್ಲಿ ಕಾರ್ಯ ನಿರ್ವಹಿಸಿ, ಶ್ರೀಮಂತರಾಗಿ ಬೆಳೆಯಲಾರಂಭಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸ್ಥಾಪನೆ


ಕಾಲಕ್ರಮೇಣ ಬ್ರಾಹ್ಮಣರಲ್ಲಿದ್ದ ಒಳಪಂಗಡಗಳು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಉದಾರ ಮನಸ್ಸಿನಿಂದ , ಅಡ್ಡಗೋಡೆಗಳನ್ನು ಕಳಚಿ ನಾವು ಬ್ರಾಹ್ಮಣರು ಎಂಬ ಏಕಾತ್ಮತಾಭಾವ ಜಾಗೃತವಾಯಿತು. 1940 ರಲ್ಲಿ ತುಮಕೂರಿನಲ್ಲಿ ಮತ್ತು 1950ರಲ್ಲಿ ಹಾಸನದಲ್ಲಿ ಈ ಎರಡು ಸಂಧರ್ಬಗಳಲ್ಲಿ ಮೈಸೂರು ರಾಜ್ಯ ಬ್ರಾಹ್ಮಣರ ಸಭೆಗಳು ಸ್ಥಾಪಿತವಾಗಿ ಅಲ್ಪಾವಧಿಯಲ್ಲಿಯೇ ಅವುಗಳ ಚಟುವಟಿಕೆ ಸ್ಥಗಿತಗೊಂಡಿತು. ರಾಜ್ಯಮಟ್ಟದ ಬ್ರಾಹ್ಮಣರ ಸಂಘಟನೆ ಪುನರ್ಜನ್ಮ ಪದೆಡದು 1972ರಲ್ಲಿ. ಬೆಂಗಳೂರಿನಲ್ಲಿ "ಬ್ರಾಹ್ಮಣ ಯುವಕ ಸಂಘ" ಎಂಬ ವಿಪರ ಯುವಕರ ತಂಡವು, ಬಹಳ ಉತ್ಸಾಹದಿಂದ ಬಾಗಲಕೋಟೆಯಲ್ಲಿ ನಡೆದ ವಿಪ್ರ ಅವಹೇಳನವನ್ನು ಪ್ರತಿಭಟಿಸುವ ಎದೆಗಾರಿಕೆಯನ್ನು ಪ್ರಪ್ರಥಮವಾಗಿ ರಾಜ್ಯಮಟ್ಟದ ಬ್ರಾಹ್ಮಣರ ಸಮ್ಮೇಳನದಲ್ಲು ಏರ್ಪಡಿಸಿತು. ಈ ಸಂಘಟನೆಯನ್ನು ಸಹಿಸದ, ಅನ್ಯವರ್ಗಕ್ಕೆ ಸೇರಿದ ಕೆಲವು ಯುವಕರ ಆ ಸಮ್ಮೇಳನದಲ್ಲಿ ಬಲಪ್ರಯೋಗದಿಂದ ಕಪ್ಪು ಭಾವುಟವನ್ನು ಹಾರಿಸುವ ಪ್ರಯತ್ನವನ್ನು ಅಂದಿನ ಕೆಲವು ವಿಪ್ರ ಯುವ ಮುಖಂಡರು ನಿಲ್ಲಿಸಿದ್ದೇ ಅಲ್ಲದೆ, ಆ ಪ್ರತಿಭಟನಾಕಾರರನ್ನು ಹೊರದೂಡುವಲ್ಲಿ ಯಶಸ್ವಿಯಾದರು. ನೆರದಿದ್ದ ವಿಪ್ರಸಮೂಹದಲ್ಲಿ ಸಂಘಟನಾ ಶಕ್ತಿಯ ವಿರಾಟ್ ಪ್ರದರ್ಶನ ವಿದ್ಯುತ್ ಸಂಚಾರವಾಗಿ ಉತ್ಸಾಹ ಇಮ್ಮಡಿಸುವಂತೆ ಕೆಲವು ವಿಪರ ಹಿರಿಯ ಮುಖಂಡರ ಕೆಚ್ಚೆದೆಯ ಬಿಚ್ಚು ಮಾತಿನ ಭಾಷಣ ವಿಪ್ರಬಂಧುಗಳಲ್ಲಿ ಆದಮ್ಯ ವಿಶ್ವಾಸ ಮೂಡಿಸಿತು.

ಹೀಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಕುರಾರ್ಪಣವಾಗಿ ದಿನಾಂಕ 11.07.1974 ರಂದು ಅಧಿಕೃತವಾಗಿ ನೊಂದಣೆಯಾದ ಸಂಸ್ಥೆಯಾಯಿತು.

ಕೈ ಜೋಡಿಸಿ . ಸಮಾಜದ ಸಂಘಟನೆ ಪ್ರದರ್ಶಿಸೋಣ

ಇಂದೇ ಸದಸ್ಯರಾಗಿ

ಸದಸ್ಯತ್ವ ಶುಲ್ಕ ಕೇವಲ ರೂ. 500/- ಮಾತ್ರ

ಹೆಚ್ಚಿನ ಮಾಹಿತಿಗಾಗಿ [email protected] ಗೆ ಈಮೇಲ್ ಮಾಡಿ

Gayatri Bhavan, No. 3070,
Gayatri Bhavan Road, 9th Main Road,
Banashankari 2nd Stage, Bangalore - 560 070
Phone: +91 80 26771695
+91 80 26770066
Email: [email protected]