Professional directory

ಮಹಾಸಭೆಯ ಹೊಸ ಯೋಜನೆಗಳು

ತ್ರಿಮತ ಭೇದವನ್ನು ಮರೆತು ನಮ್ಮ ಸಂಪ್ರದಾಯಗಳನ್ನು ಮನೆಯೊಳಗೆ ಇಟ್ಟುಕೊಂಡು ನಾನೊಬ್ಬ ಬ್ರಾಹ್ಮಣ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳಬೇಕಾಗಿ ವಿನನಂತಿ. ಬ್ರಾಹ್ಮಣ ಮಹಾಸಭೆಯು ನನಗೇನು ಮಾಡಿದೆ ಎನ್ನುವುದಕ್ಕೆ ಬದಲಾಗಿ ನಾನು ಬ್ರಾಹ್ಮಣ ಮಹಾಸಭೆಗೆ ಏನನ್ನು ಮಾಡಬೇಕಾಗಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸಾಧ್ಯವಾದಷ್ಟು ಸಹಾಯ-ಸಹಕಾರ ನೀಡಿ. ಸಮಾಜಕ್ಕೆ ನಮ್ಮ ಋಣವನ್ನು ತೀರಿಸಬೇಕಾದುದು ನಮ್ಮ ಆದ್ಯಕರ್ತವ್ಯ. ತನು-ಮನ-ಧನದ ರೂಪದಲ್ಲಿ ಸಮಾಜದ ಸೇವೆಯನ್ನು ಮಾಡುವುದರ ಮೂಲಕ ಭಗವಂತನ ಆರಾಧನೆ ಮಾಡೋಣ ಬನ್ನಿ. ನಮ್ಮೊಡನೆ ಸಹಭಾಗಿಯಾಗಿ.

ವಿಪ್ರ ಮಹಿಳಾ ವಸತಿ ನಿಲಯ ನಿರ್ಮಾಣ

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಪದ್ಮನಾಭನಗರದಲ್ಲಿ ಪಡೆದ 30,000 ಚದರ ಅಡಿ ನಿವೇಶನದಲ್ಲಿ ಹಂತಹಂತವಾಗಿ ರಾಜ್ಯದ ಮಹಿಳೆಯರಿಗೆ ಅನುಕೂಲವಾಗುವ ಹಾಗೆ "ವಿಪ್ರ ಮಹಿಳಾ ವಸತಿ ನಿಲಯ" ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ವಿಪ್ರಬಂಧುಗಳಿಗಾಗಿ "ವಿಪರ ವಸತಿ ನಿಲಯ" ನಿರ್ಮಾಣ ಮತ್ತು ಅತ್ಯಾಧುನಿಕವಾದ "ಸಭಾಂಗಣ" ವನ್ನು ನಿರ್ಮಾಣ ಮಾಡುವ ಯೋಜನೆಯಿದೆ. ಮೊದಲನೇ ಹಂತವಾಗಿ ಸುಮಾರು ಐದು ಕೋಟಿ ಅಂದಾಜಿನಲ್ಲಿ ಮಹಿಳಾ ವಸತಿ ನಿಲಯದ ನಿರ್ಮಾಣ ಕಾರ್ಯ ಪ್ರಗತಿ ಪಥದಲ್ಲಿ ಸಾಗುತ್ತಿದೆ.


ಜನಹಿತ ಕಾರ್ಯಕ್ರಮಗಳು

ಪ್ರವಾಸ

ರಾಜ್ಯದ ವಿವಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಏರ್ಪಡಿಸಿದ್ದ ಸಮ್ಮೇಳನಗಳಲ್ಲಿ ಮಹಾಸಭೆಯ ಅದ್ಯಕ್ಷರು ಹಾಗು ಪದಾಧಿಕಾರುಗಳು ಭಾಗವಹಿಸಿ, ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ. ಅನೇಕ ದೇವತಾ ಉತ್ಸವಗಳನ್ನು, ವಿಶೇಷ ಸಮಾರಂಭಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಘಸಂಸ್ಥೆಗಳ, ವಿಪ್ರಬಾಂಧವರ ಆದರ - ಅಭಿಮಾನಕ್ಕೆ ಪಾತ್ರರಾಗುತ್ತಿದ್ದಾರೆ.

ಸಂಘಟನೆ ಪ್ರದರ್ಶನ

1989ರ ಇಸವಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಪೂಜಾರಿ ಕೃಷ್ಣ" ದಾರಾವಾಹಿಯಲ್ಲಿ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ದೃಶ್ಯಗಳಿದ್ದವು.ಇದನ್ನು ಪ್ರತಿಭಟಿಸಲು ಸಾವಿರಾರು ವಿಪ್ರರು, ರಾಜಕೀಯ ಮುಖಂಡರು ಬೃಹತ್ತಾದ ಪ್ರತಿಭಟನಾ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಬ್ರಾಹ್ಮಣರ ಈ ವಿರಾಟ್ ಶಕ್ತಿಯನ್ನು ಕಂಡು ತತ್ತರಿಸಿದ್ದ ದೂರದರ್ಶನ ಕೇಂದ್ರದ ಅಧಿಕಾರಿಗಳು, ಕೂಡಲೇ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುತೆವೆಂದು ಆಶ್ವಾಸನೆ ನೀಡಿ, ಅದೇ ದಿನ ಸಂಜೆ, ವಾರ್ತಾಪ್ರಸಾರದ ನಂತರ ಕ್ಷಮೆಯಾಚಿಸಿದರು. ಇದೊಂದು ಮರೆಯಲಾರದ ಅನುಭವ ಹಾಗೂ ಬ್ರಾಹ್ಮಣರು ಸಂಘಟಿತರಾದರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು ಸಾಕ್ಷೀಭೂತವಾಗಿತ್ತು.

ಮೀಸಲಾತಿ ಮಿತಿ

ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದವರು ರಾಜಕೀಯ ಹಿತಾಸಕ್ತಿಗಾಗಿ ಮಿತಿಮೀರಿದ ಮೀಸಲಾತಿಯನ್ನು ಘೋಷಿಸಿದಾಗ, 1991ರಲ್ಲಿ ನ್ಯಾಯಾಲಯದಲ್ಲಿ ನ್ಯಾಯಬದ್ಧ ಹೋರಾಟ ನಡೆಸಿದ್ದರಿಂದ "ಯಾವುದೇ ಕಾರಣಕ್ಕೂ ಮೀಸಲಾತಿ ಪ್ರಮಾಣವು ಪ್ರತಿಶತ 50ಅನ್ನು ಮೀರಬಾರದೆಂದು" ಉಚ್ಚ ನ್ಯಾಯಾಲಯವು ಆದೇಶ ವನ್ನು ನೀಡಿತು. ಇದರಿಂದ ಅನೇಕ ಪ್ರತಿಭಾವಂತ ವಿಪ್ರ ತರುಣರಿಗೆ ಉತ್ತಮ ಅವಕಾಶಗಳು ದೊರೆಯುತ್ತಿದೆ ಎಂಬುದು ವಿಪ್ರ ಸಂಘಟನೆಯ ಮತ್ತೊಂದು ಫಲಶ್ರುತಿ.

ವಿಪ್ರನುಡಿ

ಬ್ರಾಹ್ಮಣ ಮಹಾಸಭೆಯ ಅಧಿಕೃತವಾದ ಮುಖವಾಣಿ ಈ ಮಾಸಪತ್ರಿಕೆ.ಸುಮಾರು ಮೂರು ದಶಕಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆಯಲ್ಲಿ ಬ್ರಾಹ್ಮಣ ಸಂಘಗಳು ಹಾಗೂ ಮಹಾಸಭೆಯ ವರದಿಯನ್ನು, ಅಧ್ಯಕ್ಷರ ಮನವಿ ಮತ್ತು ಸಂದೇಶವನ್ನು, ಆಗಾಗ್ಗೆ ಲೇಖನಗಳನ್ನೂ ಪ್ರಕಟಿಸಲಾಗುತ್ತಿದೆ. ಪತಿಕೆಯನ್ನು ರಾಜ್ಯಾದ್ಯಂತ ನೆಲೆಸಿರುವ ಮಹಾಸಭೆಯ ಆಜೀವ / ದಾನಿ ಸದಸ್ಯರಿಗೆ, ಅಂಗಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಲಾಗುತ್ತಿದೆ. ಮುದ್ರಣ-ಅಂಚೆವೆಚ್ಚ ಸೇರಿ ತಿಂಗಳಿಗೆ ಪ್ರತಿ ಸಂಚಿಕೆಗೆ 6.00 ರೂ. ಆಗುತ್ತಿದೆ. ವರ್ಷಕ್ಕೆ 72 ರೂ. ಖರ್ಚು ಬರುತ್ತಿದೆ. ಆದರೆ ಸದಸ್ಯತ್ವ ಶುಲ್ಕದಿಂದ ಬರುವ ವಾರ್ಷಿಕ ಬಡ್ಡಿ ಈಗ ಕೇವಲ 50.00 ರೂ. ಮಾತ್ರವಾಗಿರುತ್ತದೆ. ಹೀಗಿದ್ದರೂ ಪತ್ರಿಕಾ ಪ್ರಕಟಣೆಯನ್ನು ನಿಲ್ಲಿಸಲಿಲ್ಲ. ವಿಪ್ರ ಬಾಂಧವರು ದಯಮಾಡಿ ಜಾಹೀರಾತು ಸಂಗ್ರಹಿಸಿಕೋಡಬೇಕೆಂದೂ, ವಿಪ್ರನುಡಿ "ಶಾಶ್ವತ ನಿಧಿಗೆ" ದೇಣಿಗೆಯನ್ನು ನೀಡಬೇಕೆಂದು ವಿನಂತಿಸಲಾಗಿದೆ. ಪತ್ರಿಕೆಯನ್ನು ಉಳಿಸಿ, ಬೆಳಸುವ ಜವಾಬ್ದಾರಿ ವಿಪ್ರ ಸಮಾಜಕ್ಕೆ ಸೇರಿದೆ.

ಕೇಂದ್ರ ನಿಧಿ

ರಾಜ್ಯಮಟ್ಟದ ಆರು ಮತ್ತು ಏಳು ಸಮ್ಮೇಳನದ ಸಂದರ್ಭದಲ್ಲಿ ಸಂಗ್ರಹಿಸಲಾಗಿದೆ ಸುಮಾರು 4 ಲಕ್ಷ ರೂ.ಗಳನ್ನು ಶಾಶ್ವತ ನಿಧಿಯಾಗಿಟ್ಟು, ಬರುವ ಆದಾಯದಿಂದ ಅಶಕ್ತ ಮಹಿಲ್ಯರಿಗೆ, ಪುರೋಹಿತ, ಅರ್ಚಕ, ವೇದವಿದ್ವಾಂಸರಿಗೆ ಮಾಸಾಶನವನ್ನು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ.ನೂರಾರು ಸಂಖ್ಯೆಯ ವಿಪ್ರ ಬಾಂಧವರು ಇದರ ಫಲಾನುಭಾವಿಗಲಾಗಿದ್ದಾರೆ. ಇದೀಗ ಕೇಂದ್ರನಿಧಿಯಲ್ಲಿ 55 ಲಕ್ಷ ರೂ.ಗಳು ಠೇವಣಿಯಲ್ಲಿದ್ದು, ಇದರಿಂದ ಬರುವ ಬಡ್ಡಿಹಣವು ಹೆಚ್ಚು ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಲು ಸಾಧ್ಯವಾಗುತಿಲ್ಲ. ಬೇಡಿಕೆಯು ಅಧಿಕವಾಗಿದ್ದು ಮೂಲದ್ರವ್ಯ ಕಡಿಮೆಯಾಗಿದೆ.ಒಂದು ಕೋಟಿ ಮೊತ್ತದ ಕೇಂದ್ರನಿಧಿಯನ್ನು ಕೂಡಿಸಲು ಕೈಜೋಡಿಸಬೇಕಾಗಿ ವಿಪ್ರರಲ್ಲಿ ಪ್ರಾರ್ಥನೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸ್ಥಾಪನೆ


ಕಾಲಕ್ರಮೇಣ ಬ್ರಾಹ್ಮಣರಲ್ಲಿದ್ದ ಒಳಪಂಗಡಗಳು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಉದಾರ ಮನಸ್ಸಿನಿಂದ , ಅಡ್ಡಗೋಡೆಗಳನ್ನು ಕಳಚಿ ನಾವು ಬ್ರಾಹ್ಮಣರು ಎಂಬ ಏಕಾತ್ಮತಾಭಾವ ಜಾಗೃತವಾಯಿತು. 1940 ರಲ್ಲಿ ತುಮಕೂರಿನಲ್ಲಿ ಮತ್ತು 1950ರಲ್ಲಿ ಹಾಸನದಲ್ಲಿ ಈ ಎರಡು ಸಂಧರ್ಬಗಳಲ್ಲಿ ಮೈಸೂರು ರಾಜ್ಯ ಬ್ರಾಹ್ಮಣರ ಸಭೆಗಳು ಸ್ಥಾಪಿತವಾಗಿ ಅಲ್ಪಾವಧಿಯಲ್ಲಿಯೇ ಅವುಗಳ ಚಟುವಟಿಕೆ ಸ್ಥಗಿತಗೊಂಡಿತು. ರಾಜ್ಯಮಟ್ಟದ ಬ್ರಾಹ್ಮಣರ ಸಂಘಟನೆ ಪುನರ್ಜನ್ಮ ಪದೆಡದು 1972ರಲ್ಲಿ. ಬೆಂಗಳೂರಿನಲ್ಲಿ "ಬ್ರಾಹ್ಮಣ ಯುವಕ ಸಂಘ" ಎಂಬ ವಿಪರ ಯುವಕರ ತಂಡವು, ಬಹಳ ಉತ್ಸಾಹದಿಂದ ಬಾಗಲಕೋಟೆಯಲ್ಲಿ ನಡೆದ ವಿಪ್ರ ಅವಹೇಳನವನ್ನು ಪ್ರತಿಭಟಿಸುವ ಎದೆಗಾರಿಕೆಯನ್ನು ಪ್ರಪ್ರಥಮವಾಗಿ ರಾಜ್ಯಮಟ್ಟದ ಬ್ರಾಹ್ಮಣರ ಸಮ್ಮೇಳನದಲ್ಲು ಏರ್ಪಡಿಸಿತು. ಈ ಸಂಘಟನೆಯನ್ನು ಸಹಿಸದ, ಅನ್ಯವರ್ಗಕ್ಕೆ ಸೇರಿದ ಕೆಲವು ಯುವಕರ ಆ ಸಮ್ಮೇಳನದಲ್ಲಿ ಬಲಪ್ರಯೋಗದಿಂದ ಕಪ್ಪು ಭಾವುಟವನ್ನು ಹಾರಿಸುವ ಪ್ರಯತ್ನವನ್ನು ಅಂದಿನ ಕೆಲವು ವಿಪ್ರ ಯುವ ಮುಖಂಡರು ನಿಲ್ಲಿಸಿದ್ದೇ ಅಲ್ಲದೆ, ಆ ಪ್ರತಿಭಟನಾಕಾರರನ್ನು ಹೊರದೂಡುವಲ್ಲಿ ಯಶಸ್ವಿಯಾದರು. ನೆರದಿದ್ದ ವಿಪ್ರಸಮೂಹದಲ್ಲಿ ಸಂಘಟನಾ ಶಕ್ತಿಯ ವಿರಾಟ್ ಪ್ರದರ್ಶನ ವಿದ್ಯುತ್ ಸಂಚಾರವಾಗಿ ಉತ್ಸಾಹ ಇಮ್ಮಡಿಸುವಂತೆ ಕೆಲವು ವಿಪರ ಹಿರಿಯ ಮುಖಂಡರ ಕೆಚ್ಚೆದೆಯ ಬಿಚ್ಚು ಮಾತಿನ ಭಾಷಣ ವಿಪ್ರಬಂಧುಗಳಲ್ಲಿ ಆದಮ್ಯ ವಿಶ್ವಾಸ ಮೂಡಿಸಿತು.

ಹೀಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಕುರಾರ್ಪಣವಾಗಿ ದಿನಾಂಕ 11.07.1974 ರಂದು ಅಧಿಕೃತವಾಗಿ ನೊಂದಣೆಯಾದ ಸಂಸ್ಥೆಯಾಯಿತು.

ಕೈ ಜೋಡಿಸಿ . ಸಮಾಜದ ಸಂಘಟನೆ ಪ್ರದರ್ಶಿಸೋಣ

ಇಂದೇ ಸದಸ್ಯರಾಗಿ

ಸದಸ್ಯತ್ವ ಶುಲ್ಕ ಕೇವಲ ರೂ. 500/- ಮಾತ್ರ

ಹೆಚ್ಚಿನ ಮಾಹಿತಿಗಾಗಿ [email protected] ಗೆ ಈಮೇಲ್ ಮಾಡಿ

Gayatri Bhavan, No. 3070,
Gayatri Bhavan Road, 9th Main Road,
Banashankari 2nd Stage, Bangalore - 560 070
Phone: +91 80 26771695
+91 80 26770066
Email: [email protected]