Professional directory

ಮೂರು ಸೂತ್ರಗಳು


ಸಂಘಟನೆ, ಸ್ವಾವಲಂಭನೆ, ಸಂಸ್ಕಾರ ಈ ತ್ರಿಸೂತ್ರಗಳ ಆಧಾರಧ ಮೇಲೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ತನ್ನ ಕಾರ್ಯಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ವಿಸ್ತರಿಸಿತು.

ಸಮ್ಮೇಳನಗಳು

ಇದುವರೆಗೆ ರಾಜ್ಯಮಟ್ಟದ ಎಂಟು ಸಮ್ಮೇಳನಗಳು ಏರ್ಪಾರ್ಟಾಗಿದ್ದು, ರಾಜ್ಯಾದ್ಯಂತ ಬಹುಮಟ್ಟಿಗೆ ಚೇತನ ಕೊಟ್ಟಿದೆ. ಪರೋಕ್ಷವಾಗಿ ಸಹಕಾರಿ ಬ್ಯಾಂಕುಗಳು, ಹಲವು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳು ಪ್ರಾರಂಭವಾಗಿ, ನೂರಾರು ಜನ ವಿಪ್ರ ಯುವಕರಿಗೆ ಉದ್ಯೋಗ ದೊರಕಿ, ಸಾವಿರಾರು ಜನರಿಗೆ ಸಾಲಸೌಲಭ್ಯ ನೀಡಿ ಅನೇಕ ಬಡ ಬ್ರಾಹ್ಮಣರಿಗೆ ಅನುಕೂಲವಾಗಿದೆ. ಅನೇಕ ಕಡೆ ವಿದ್ಯಸಂಸ್ಥೆಗಳನ್ನೂ, ವಿಧ್ಯಾರ್ಥಿಗಳಿಗೆ ವಸತಿನಿಲಯಗಳನ್ನೂ, ಕಲ್ಯಾಣ ಮಂಟಪಗಳನ್ನೂ, ದೇವಸ್ಥಾನಗಳನ್ನೂ, ವ್ರುದ್ಧಾಶ್ರಮಗಳನ್ನೂ ನಿರ್ಮಿಸಿ ಬ್ರಾಹ್ಮಣ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಸಂಘಗಳು ಪ್ರಯತ್ನ ನಡೆಸಿವೆ.

ರಾಜ್ಯಮಟ್ಟದ 6ನ್ನೇ ಸಮ್ಮೇಳನದ ಸಂಧರ್ಭದಲ್ಲಿ ಕೇಂದ್ರ ನಿಧಿಯನ್ನು ಸ್ಥಾಪಿಸಲಾಯಿತು. ಈ ಕಾರ್ಯಕ್ರಮಕ್ಕೆ ಪೂಜ್ಯ ಮಹಾ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದು, ಹಲವಾರು ದಾನಿಗಳಿಂದ ದೇಣಿಗೆಯನ್ನು ಪಡೆದು ಈ ನಿಧಿ ಬೃಹದಾಕಾರವಾಗಿ ಬೆಳೆಯಿತು. ಈ ನಿಧಿಯಿಂದ ಬರುವ ಬಡ್ಡಿ ಹಣದಿಂದ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಅಶಕ್ತ ಮಹಿಳೆಯರಿಗೆ ಅವಶ್ಯವಿರುವ ಮಹನೀಯರಿಗೆ ಮಾಸಾಶನವನ್ನು ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು.

ರಾಜ್ಯಮಟ್ಟದ 7ನೇ ಸಮ್ಮೇಳನದ ಸಂಧರ್ಬದಲ್ಲಿ "ವಿಪ್ರ ವೈಭವ" ಎಂಬ ಬೃಹತ್ ಗ್ರಂಥವನ್ನು ಹೊರತಂದು ಇಡೀ ರಾಜ್ಯದ ಏಳಿಗೆಗೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ವಿಪ್ರ ಮಹನೀಯರು ನೀಡಿದ ಅವಿಚ್ಚಿನ್ನ ಸೇವೆಯ ನೆನಪು ಮಾಡುವ ಹಾಗೂ ಎಲ್ಲ ಕಾಲಕ್ಕೂ ಮಾಸದ ನೆನಪಿನಂತಾಯಿತು ಈ ಗ್ರಂಥ. ಇದೇ ಸಂಧರ್ಬದಲ್ಲಿ ಈಗಿರುವ ಶ್ರೀ ಗಾಯತ್ರೀ ಭಾವನವಿರುವ ನಿವೇಶನವನ್ನು ಖರೀದಿಸಲಾಯಿತು.

ರಾಜ್ಯಮಟ್ಟದ 8ನೇ ಸಮ್ಮೇಳನದ ಸಂಧರ್ಬದಲ್ಲಿ "ಶ್ರೀ ಗಾಯತ್ರಿ ರಥಯಾತ್ರೆ" ಒಂದು ಅವಿಸ್ಮರಣೀಯ ಹಾಗೂ ಅದ್ಭುಥವಾದಂತಹ ಕಾರ್ಯಕ್ರಮವಾಗಿತ್ತು. ಇಡೀ ರಾಜ್ಯದ ಜನರ ಮನೆ-ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹಾಗೂ ಸಂಘಟನೆ ದೃಷ್ಟಿಯಿಂದ ಪರಿಣಾಮಕಾರಿಯಾದ ಕಾರ್ಯಯೋಜನೆ ಇದಾಗಿತ್ತು. ಇದರ ಯಶಸ್ಸಿನ ಬಗ್ಗೆ ಹಲವರಿಗೆ ಅನುಮಾನವಿತ್ತು. ಸಮ್ಮೇಳನದ ಪೂರ್ವಭಾವಿಯಾಗಿ ಇದೇ ಪ್ರಪ್ರಥಮ ಬಾರಿಗೆ ಶ್ರೀ ಗಾಯತ್ರಿ ಮಾತೆಯ ರಥಯಾತ್ರೆಯು ಇಡೀ ರಾಜ್ಯದಲ್ಲಿ 174 ತಾಲ್ಲೂಕುಗಳನ್ನು ಸುಮಾರು 7,800 ಕಿ.ಮೀ. ದೂರ ಸಂಚರಿಸಿ, ಸಮಸ್ತ ವಿಪರ ಬಂದವರೂ ಅಲ್ಲದೆ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ರಥಯಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವುದಕ್ಕೆ ಕಾರಣೀಭೂತವಾಯಿತು. ಈ ಸಮ್ಮೆಳನದಿಂದಲೂ ಸಹಾ ಸುಮಾರು ಒಂದು ಕೋಟಿ ರುಪಾಯಿಗಳನ್ನು ಉಳಿಸಿ ಬೆಂಗಳೂರು ಮಹಾನಗರದ ಪದ್ಮನಾಭನಗರದಲ್ಲಿ ಸುಮಾರು 30,000 ಚದರ ಅಡಿ ಸಿ.ಎ ನಿವೇಶನವನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಪಡೆಯಲು ಅನುವಾಯಿತು .

ಕೇಂದ್ರ ಸಮಿತಿಯ ರಚನೆಯ ಸ್ವರೂಪ:

1072 ರಲ್ಲಿ ಕೇವಲ 10-15 ಸಂಕ್ಯೆಯಲ್ಲಿದ್ದ ಬ್ರಾಹ್ಮಣ ಸಂಘಗಳು 500 ಸಂಕ್ಯೆಯ ಗಾಡಿಯನ್ನು ದಾಟಿತು. ಬಹುತೇಕ ಎಲ್ಲಾ ಸಂಘಗಳು ಮಹಾಸಭೆಯ ಅಂಗಸಂಸ್ಥೆಯ ಸದಸ್ಯತ್ವವನ್ನು ಪಡೆದಿದೆ.ಆದ್ದರಿಂದ ಅನೇಕ ಬ್ರಾಹ್ಮಣ ಸಂಘಗಳ ಒಕ್ಕೂಟ ಜೊತೆಯಲ್ಲಿಯೇ ವೈಯಕ್ತಿಕವಾಗಿ ಅಜೀವ / ದಾನಿ ಸದಸ್ಯರನ್ನೂ ನೋಂದಾವಣೆ ಮಾಡಿ ಕೊಳ್ಳಲಾಯಿತು. ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಸರ್ವಸದಸ್ಯರ ಸಭೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಮಹಾಸಭಾದ್ಯಕ್ಷರನ್ನು ಮಾತ್ರ ಚುನಾಯಿಸಲಾಗುತ್ತದೆ. ನಂತರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುದು. ಬ್ರಾಹ್ಮಣ ಸಮಾಜಕ್ಕೆ ಸಲ್ಲಿಸಿರುವ ಸೇವೆ, ಸಾರ್ವಜನಿಕವಾಗಿ ಗಳಿಸಿರುವ ಮನ್ನಣೆ, ವಿವಿಧ ಕ್ಷೇತ್ರಗಳಲ್ಲಿನ ಪರಿಣಿತಿ ಮುಂತಾದುವುಗಳನ್ನು ಪರಿಗಣಿಸಿ ಕೇಂದ್ರ ಸಮಿತಿಗೆ ಸದಸ್ಯರನ್ನು ನಾಮಕರಣ ಮಾಡಲಾಗುತ್ತದೆ. ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯನ್ನು ಮೂರು ತಿಂಗಳಿಗೊಮ್ಮೆ ಕರೆಯಲಾಗುವುದು. ಇಂತಹ ಸಭೆಗಳು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ, ತಾಲ್ಲೂಕಿನಲ್ಲೂ ಆಗಾಗ್ಗೆ ಏರ್ಪಡಿಸಲಾಗುವುದು .

ಸಪ್ತರ್ಷಿ ಫೌಂಡೇಷನ್

ಮಹಾಸಭೆಯ ಸೋದರ ಸಂಸ್ಥೆಯಾಗಿ ಈ ಟ್ರಸ್ಟ್ ಅನ್ನು ಪ್ರಾರಂಭಿಸಲಾಗಿದೆ. ಇದರ ಆಶ್ರಯದಲ್ಲಿ "ಗಾಯತ್ರಿ ಭವನ" ವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸಮಾಜದ ಒಳಿತಿಗಾಗಿ ಸಭೆ-ಸಮಾರಂಭಗಳನ್ನು, ಸದಸ್ಯರ ಬಳಕೆಗೂ ಈ ಭವನ ಉಪಯೋಗಿಕಾರಿಯಾಗಿದೆ. 1998ರಲ್ಲಿ ಪ್ರಾರಂಭವಾದ ಈ ಟ್ರಸ್ಟ್ ದೇಣಿಗೆ ನೀಡಿರುವ ಅನುಕೂಲಕ್ಕಾಗಿ ಆದಾಯ ತೆರಿಗೆ ಕಾಯ್ದೆ 80ಜಿ ಅನ್ವಯ ವಿನಾಯಿತಿ ಇರುತ್ತದೆ.

ಅಖಿಲ ಭಾರತ ಬ್ರಾಹ್ಮಣ ಮಹಾಮಂಡಲ

1983ರಲ್ಲಿ ಬೆಂಗಲೂರ್ನಲ್ಲಿ ನಡೆದ 4ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಭಾರತದ ಅನೇಕ ರಾಜ್ಯಗಲಿಂದ ಸುಮಾರು ಇನ್ನೂರಕ್ಕೂ ಹೆಚ್ಚು ವಿಪ್ರ ಪ್ರತಿನಿಧಿಗಳು ಆಗಮಿಸಿದ್ದರು. ಹೊರರಾಜ್ಯಗಳಿಂದ ಆಗಮಿಸಿದ್ದ ಮುಖಂಡರು ಜೊತೆ ರಾಜ್ಯದ ವಿಪ್ರ ಮುಖಂಡರು ವಿಚಾರ ವಿನಿಮಯ ಮಾಡಿದ ಪರಿಣಾಮವಾಗಿ ಮಹಾಮಂಡಲಿಯು ಅಸ್ತಿತ್ವಕ್ಕೆ ಬಂದಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸ್ಥಾಪನೆ


ಕಾಲಕ್ರಮೇಣ ಬ್ರಾಹ್ಮಣರಲ್ಲಿದ್ದ ಒಳಪಂಗಡಗಳು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಉದಾರ ಮನಸ್ಸಿನಿಂದ , ಅಡ್ಡಗೋಡೆಗಳನ್ನು ಕಳಚಿ ನಾವು ಬ್ರಾಹ್ಮಣರು ಎಂಬ ಏಕಾತ್ಮತಾಭಾವ ಜಾಗೃತವಾಯಿತು. 1940 ರಲ್ಲಿ ತುಮಕೂರಿನಲ್ಲಿ ಮತ್ತು 1950ರಲ್ಲಿ ಹಾಸನದಲ್ಲಿ ಈ ಎರಡು ಸಂಧರ್ಬಗಳಲ್ಲಿ ಮೈಸೂರು ರಾಜ್ಯ ಬ್ರಾಹ್ಮಣರ ಸಭೆಗಳು ಸ್ಥಾಪಿತವಾಗಿ ಅಲ್ಪಾವಧಿಯಲ್ಲಿಯೇ ಅವುಗಳ ಚಟುವಟಿಕೆ ಸ್ಥಗಿತಗೊಂಡಿತು. ರಾಜ್ಯಮಟ್ಟದ ಬ್ರಾಹ್ಮಣರ ಸಂಘಟನೆ ಪುನರ್ಜನ್ಮ ಪದೆಡದು 1972ರಲ್ಲಿ. ಬೆಂಗಳೂರಿನಲ್ಲಿ "ಬ್ರಾಹ್ಮಣ ಯುವಕ ಸಂಘ" ಎಂಬ ವಿಪರ ಯುವಕರ ತಂಡವು, ಬಹಳ ಉತ್ಸಾಹದಿಂದ ಬಾಗಲಕೋಟೆಯಲ್ಲಿ ನಡೆದ ವಿಪ್ರ ಅವಹೇಳನವನ್ನು ಪ್ರತಿಭಟಿಸುವ ಎದೆಗಾರಿಕೆಯನ್ನು ಪ್ರಪ್ರಥಮವಾಗಿ ರಾಜ್ಯಮಟ್ಟದ ಬ್ರಾಹ್ಮಣರ ಸಮ್ಮೇಳನದಲ್ಲು ಏರ್ಪಡಿಸಿತು. ಈ ಸಂಘಟನೆಯನ್ನು ಸಹಿಸದ, ಅನ್ಯವರ್ಗಕ್ಕೆ ಸೇರಿದ ಕೆಲವು ಯುವಕರ ಆ ಸಮ್ಮೇಳನದಲ್ಲಿ ಬಲಪ್ರಯೋಗದಿಂದ ಕಪ್ಪು ಭಾವುಟವನ್ನು ಹಾರಿಸುವ ಪ್ರಯತ್ನವನ್ನು ಅಂದಿನ ಕೆಲವು ವಿಪ್ರ ಯುವ ಮುಖಂಡರು ನಿಲ್ಲಿಸಿದ್ದೇ ಅಲ್ಲದೆ, ಆ ಪ್ರತಿಭಟನಾಕಾರರನ್ನು ಹೊರದೂಡುವಲ್ಲಿ ಯಶಸ್ವಿಯಾದರು. ನೆರದಿದ್ದ ವಿಪ್ರಸಮೂಹದಲ್ಲಿ ಸಂಘಟನಾ ಶಕ್ತಿಯ ವಿರಾಟ್ ಪ್ರದರ್ಶನ ವಿದ್ಯುತ್ ಸಂಚಾರವಾಗಿ ಉತ್ಸಾಹ ಇಮ್ಮಡಿಸುವಂತೆ ಕೆಲವು ವಿಪರ ಹಿರಿಯ ಮುಖಂಡರ ಕೆಚ್ಚೆದೆಯ ಬಿಚ್ಚು ಮಾತಿನ ಭಾಷಣ ವಿಪ್ರಬಂಧುಗಳಲ್ಲಿ ಆದಮ್ಯ ವಿಶ್ವಾಸ ಮೂಡಿಸಿತು.

ಹೀಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಕುರಾರ್ಪಣವಾಗಿ ದಿನಾಂಕ 11.07.1974 ರಂದು ಅಧಿಕೃತವಾಗಿ ನೊಂದಣೆಯಾದ ಸಂಸ್ಥೆಯಾಯಿತು.

ಕೈ ಜೋಡಿಸಿ . ಸಮಾಜದ ಸಂಘಟನೆ ಪ್ರದರ್ಶಿಸೋಣ

ಇಂದೇ ಸದಸ್ಯರಾಗಿ

ಸದಸ್ಯತ್ವ ಶುಲ್ಕ ಕೇವಲ ರೂ. 500/- ಮಾತ್ರ

ಹೆಚ್ಚಿನ ಮಾಹಿತಿಗಾಗಿ [email protected] ಗೆ ಈಮೇಲ್ ಮಾಡಿ

Gayatri Bhavan, No. 3070,
Gayatri Bhavan Road, 9th Main Road,
Banashankari 2nd Stage, Bangalore - 560 070
Phone: +91 80 26771695
+91 80 26770066
Email: [email protected]